ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ವೃತ್ತಿ ಮೇಳದಿಂದ ನಿವೃತ್ತಿಯಾಗುವೆ : ಬಳ್ಕೂರು ಕೃಷ್ಣ ಯಾಜಿ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶನಿವಾರ, ಒಕ್ಟೋಬರ್ 26 , 2013
ಒಕ್ಟೋಬರ್ 27 , 2013

ವೃತ್ತಿ ಮೇಳದಿಂದ ನಿವೃತ್ತಿಯಾಗುವೆ

ನವಿ ಮುಂಬಯಿ : ಅನಾರೋಗ್ಯದ ಕಾರಣದಿಂದಾಗಿ ವೃತ್ತಿ ಮೇಳದಲ್ಲಿನ ತಿರುಗಾಟವನ್ನು ನಿಲ್ಲಿಸಿ, ನಿವೃತ್ತಿ ಹೊಂದುವುದು ಅನಿವಾರ್ಯವಾಗಿದೆ. ಕೇವಲ ಅತಿಥಿ ಕಲಾವಿದನಾಗಿ ಕೆಲವೊಂದು ಪ್ರದರ್ಶನಗಳಲ್ಲಿ ಭಾಗವಹಿಸುತ್ತೇನೆ ಎಂದು ಬಡಗುತಿಟ್ಟಿನ ಪ್ರಸಿದ್ಧ ವೇಷಧಾರಿ ಬಳ್ಕೂರು ಕೃಷ್ಣ ಯಾಜಿ ಘೋಷಿಸಿದರು.

ತಾಲೂಕಿನ ಹೆಗ್ಗೊàಡಿನ ಡಾ| ಶಿವರಾಮ ಕಾರಂತ ರಂಗಮಂದಿರದಲ್ಲಿ ಯಾಜಿ ಯಕ್ಷಮಿತ್ರ ಮಂಡಳಿ ಹಮ್ಮಿಕೊಂಡಿದ್ದ 'ಸುಭದ್ರಾ ಕಲ್ಯಾಣ' ಯಕ್ಷಗಾನ ಪ್ರದರ್ಶನ ನಂತರ ಮಾತನಾಡಿದ ಅವರು, ನಾಲ್ಕು ದಶಕಗಳ ಕಾಲ ರಂಗಸ್ಥಳದಲ್ಲಿ ಕಲಾವಿದನಾಗಿ ಅಭಿನಯಿಸಿದ ಸಂದರ್ಭದಲ್ಲಿ ಯಕ್ಷಗಾನವನ್ನು ಹಾಳು ಮಾಡಲಿಲ್ಲ ಎಂಬ ತƒಪ್ತಿ ನನಗಿದೆ ಎಂದರು. ಯಕ್ಷಗಾನ ರಂಗಭೂಮಿ ಆರ್ಥಿಕ ಸಂಕಷ್ಟದಲ್ಲಿದ್ದಾಗ ಪ್ರೇಕ್ಷಕರು, ಅಭಿಮಾನಿಗಳು ಕೈ ಹಿಡಿದು ಮೇಲೆತ್ತಿದ್ದಾರೆ. ಸಮಾಜದಿಂದ ತಾನು ಪಡೆದುಕೊಂಡಿದ್ದನ್ನು ಮರಳಿ ಕೊಡುವ ಋಣ ಪ್ರಜ್ಞೆ ಕಲಾವಿದರಿಗೆ ಅಗತ್ಯ. ಕಲಾವಿದರು ಅನುಭವಿಸುವ ಸಂಕಷ್ಟಗಳ ಸಂದರ್ಭಗಳಲ್ಲಿ ಸಮಾಜ ಸ್ಪಂದಿಸಿದ ರೀತಿಯಲ್ಲಿಯೇ ಕಲಾವಿದರೂ ಮತ್ತೂಬ್ಬ ಕಲಾವಿದರ ಕಷ್ಟಗಳಿಗೆ ಒದಗಬೇಕು ಎಂದರು.

ಕಲೆಗಳನ್ನು ಪ್ರದರ್ಶಿಸುವಾಗ ವ್ಯವಹಾರವನ್ನು ಮಾತ್ರ ನೋಡಬಾರದು. ಆರ್ಥಿಕವಾಗಿ ಕಲಾವಿದರು ಬಹಳಷ್ಟನ್ನು ಕಳೆದುಕೊಂಡಿರಬಹುದು, ಆದರೆ ಪ್ರೇಕ್ಷಕರಿಂದ, ಅಭಿಮಾನಿಗಳಿಂದ, ಸಮಾಜದಿಂದ ಅಳೆಯಲಾಗದ ಅಭಿಮಾನ, ಪೊÅàತ್ಸಾಹ ದೊರಕಿದೆ. ಇದರಿಂದಾಗಿ ಯಕ್ಷಗಾನ ಇಂದು ಉಳಿದಿದೆ. ಕಳೆದ ಏಳು ವರ್ಷಗಳಿಂದ ಯಾಜಿ ಯಕ್ಷ ಮಿತ್ರ ಮಂಡಳಿಯ ಮೂಲಕ ಕಲಾವಿದರನ್ನು ಗೌರವಿಸಲಾಗುತ್ತಿದೆ. 73 ವರ್ಷಗಳಿಂದ ಯಕ್ಷಗಾನ ಭಾಗವತಿಕೆ ಮಾಡುತ್ತಿರುವ 93 ವರ್ಷದ ಜಾನಪದ ಹಕ್ಕಿ ಕೊಪ್ಪದಮಕ್ಕಿ ಈರಪ್ಪನವರನ್ನು ನ. 9ರಂದು ಉತ್ತರ ಕನ್ನಡದ ಕುಮಟಾದ ಹವ್ಯಕ ಸಭಾಭವನದಲ್ಲಿ ಗೌರವಿಸಲಾಗುತ್ತದೆ ಎಂದು ಪ್ರಕಟಿಸಿದರು.

ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ರಾಮಕೃಷ್ಣ ಹೆಗಡೆ, ಪರಮೇಶ್ವರ ಭಂಡಾರಿ, ರಾಮ ಭಂಡಾರಿ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅಶೋಕ ಭಟ್ಟ ಸಿದ್ದಾಪುರ, ಪ್ರಸನ್ನ ಶೆಟ್ಟಿಗಾರ್‌, ರಾಜೇಶ ಭಂಡಾರಿ, ನಾಗರಾಜ ಭಂಡಾರಿ, ಪುರಂದರ ಮೊದಲಾದವರು ಇದ್ದರು.

ಕೃಪೆ : http://www.udayavani.com/


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ